ಸಿವಿಲ್ ನ್ಯಾಯಾಧೀಶರಾಗಿ ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನ ನಾಲ್ವರು ಆಯ್ಕೆ

ಚನ್ನಬಸಪ್ಪ ಆರ್.ಕೂಡಿ, ಕು.ಬಿ.ಎಸ್.ವಿನುತಾ, ಪ್ರೊ.ಬಿ.ಬಿ.ಎಸ್.ರೆಡ್ಡಿ,ಪ್ರಾಂಶುಪಾಲರು. ಕು.ನಿಖಿತಾ ಎಸ್.ಅಕ್ಕಿ, ಶ್ರೀಮತಿ ಎಸ್.ಎಸ್.ಶಿಲ್ಪಶ್ರೀ
Share
  • 320
    Shares

ದಾವಣಗೆರೆ-ಬಾಪೂಜಿ ವಿದ್ಯಾಸಂಸ್ಥೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ೨೦೧೮-೧೯ನೇ ಸಾಲಿನಲ್ಲಿ ಅಭ್ಯಾಸ ಮಾಡಿ ರಾಜ್ಯದ ಅಧೀನ ನ್ಯಾಯಾಲಯಗಳಿಗೆ ಸಿವಿಲ್ ನ್ಯಾಯಾಧೀಶರಾಗಿ ಚನ್ನಬಸಪ್ಪ ಆರ್.ಕೂಡಿ ,ಕು.ಬಿ.ಎಸ್.ವಿನುತಾ,.ಕು.ನಿಖಿತಾ ಎಸ್.ಅಕ್ಕಿ, ಶ್ರೀಮತಿ ಎಸ್.ಎಸ್.ಶಿಲ್ಪಶ್ರೀ ಈ ನಾಲ್ಕು ಜನ ಆಯ್ಕೆಯಾಗಿದ್ದಾರೆ.
೧.ಕುಮಾರಿ ನಿಖಿತ ಎಸ್. ಅಕ್ಕಿ ದಿವಂಗತ ಸುರೇಶ್ ಬಾಬು ಎಸ್. ಅಕ್ಕಿ, ಅಪರ್ಣ ಸುರೇಶ ಅಕ್ಕಿ , ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ದಾವಣಗೆರೆ ಇವರ ಪುತ್ರಿಯಾಗಿದ್ದು, ರಾಜ್ಯದಲ್ಲಿ ೨೦೧೮-೧೯ನೇ ಸಾಲಿನಲ್ಲಿ ಆಯ್ಕೆಯಾಗಿರುವ ನ್ಯಾಯಾಧೀಶರುಗಳಲ್ಲಿ ಅತೀ ಕಿರಿಯ ವಯಸ್ಸಿನವರಾಗಿದ್ದಾರೆ. ೨೪ನೇ ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಗೊಂಡಿದ್ದಾರೆ. ಆರ್.ಎಲ್. ಕಾನೂನು ಕಾಲೇಜಿನಲ್ಲಿ ೨೦೧೧-೧೫ನೇ ಸಾಲಿನಲ್ಲಿ ೫ ವರ್ಷದ ಬಿ.ಎ., ಎಲ್‌ಎಲ್.ಬಿ., ಪದವಿ ವ್ಯಾಸಂಗ ಮಾಡಿ ನಂತರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
೨.ಕುಮಾರಿ ವಿನುತ ವಿ.ಎಸ್. ರವರು ಪಿ.ಕೆ.ಜಿ.ಬಿ.ಯಲ್ಲಿ (ನಿವೃತ್ತ ರಿಜಿನಲ್ ಆಫೀಸರ್) ಶಿವಕುಮಾರ್ ಬಿ.ಎಸ್. ಹಾಗೂ ವಸಂತ ಕೆ.ಜಿ. ಇವರ ಸುಪುತ್ರಿಯಾಗಿರುತ್ತಾರೆ. ಇವರು ೨೦೧೩-೧೫ನೇ ಸಾಲಿನಲ್ಲಿ ೩ ವರ್ಷದ ಎಲ್‌ಎಲ್.ಬಿ., ಪದವಿಯನ್ನು ವಿಧ್ಯಾಭ್ಯಾಸ ಮಾಡಿದ್ದು, ನಂತರ ಶ್ರೀ ರಾಮಚಂದ್ರ ಕಲಾಲ್ ಇವರ ಬಳಿ ವಕೀಲರ ವೃತ್ತಿಯನ್ನು ಮಾಡುತ್ತಿದ್ದಾರೆ. ತಮ್ಮ ೨೬ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
೩.ಶ್ರೀಮತಿ ಶಿಲ್ಪಶ್ರೀ ಎನ್.ಎಸ್. ಕೋಂ ಪ್ರವೀರ್ಣ ಎಸ್.ಆರ್. ಇವರು ೨೦೦೪-೦೮ನೇ ಸಾಲಿನಲ್ಲಿ ೫ ವರ್ಷದ ಬಿ.ಎ., ಎಲ್‌ಎಲ್.ಬಿ., ಪದವಿ ವ್ಯಾಸಂಗ ಪೂರೈಸಿದ್ದು, ದಾವಣಗೆರೆಯಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ೩೧ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
೪.ಚನ್ನಬಸಪ್ಪ ಆರ್. ಕೂಡಿ ಇವರು ೨೦೦೭-೦೯ನೇ ಸಾಲಿನಲ್ಲಿ ೩ ವರ್ಷದ ಎಲ್‌ಎಲ್.ಬಿ., ಪದವಿ ವ್ಯಾಸಂಗ ಪೂರೈಸಿದ್ದು, ದಾವಣಗೆರೆಯಲ್ಲಿ ವಕೀಲರಾಗಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಇವರು ಈರಮ್ಮ ಮತ್ತು ರುದ್ರೇಶ್ ಇವರ ಪುತ್ರರಾಗಿರುತ್ತಾರೆ. ತಮ್ಮ ೩೪ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಇವರೆಲ್ಲರಿಗೂ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು, ಹಾಲಿ ಶಾಸಕರಾಗಿರುವ ಡಾ. ಶಾಮನೂರು ಶಿವಶಂಕರಪ್ಪ ,ಮಾಜಿ ಮಂತ್ರಿಗಳಾದ ಎಸ್.ಎಸ್. ಮಲ್ಲಿಕಾರ್ಜುನ್, ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಎ.ಸಿ. ಜಯ್ಯಣ್ಣ, ಸದಸ್ಯ ಅಥಣಿ ವೀರಣ್ಣ, ಕಾಲೇಜು ಆಡಳಿತ ಸಮಿತಿಯ ಅಧ್ಯಕ್ಷರಾಗಿರುವ ಡಾ. ಆರ್. ಎಲ್. ಉಮಾಶಂಕರ್, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಂ.ಜಿ. ಈಶ್ವರಪ್ಪ, ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಬಿ.ಎಸ್. ರೆಡ್ಡಿ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಸದರಿಯವರುಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Be the first to comment on "ಸಿವಿಲ್ ನ್ಯಾಯಾಧೀಶರಾಗಿ ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನ ನಾಲ್ವರು ಆಯ್ಕೆ"

Leave a comment

Your email address will not be published.


*