ದಾವಣಗೆರೆಯ ಜನಪ್ರಿಯ ತಂಡಕ್ಕೆ ಶಿವಗಂಗಾ ಕಪ್

Share
  • 191
    Shares

ದಾವಣಗೆರೆಯಲ್ಲಿ ಕಳೆದ 5 ದಿನಗಳಿಂದ ನಡೆದ ಕ್ರಿಕೆಟ್ ಹಬ್ಬಕ್ಕೆ ಇಂದು ಮಧ್ಯರಾತ್ರಿ ತೆರೆ ಬಿದ್ದಿದ್ದು, ಫೈನಲ್ ಪಂದ್ಯದಲ್ಲಿ ಜನಪ್ರಿಯ ತಂಡವನ್ನು ಮಣಿಸಿದ ಬೆಂಗಳೂರು ನಗರದ ನ್ಯಾಶ್ ತಂಡ ಪ್ರಥಮ ಬಹುಮಾನ ಗಳಿಸಿತು.ಬೆಂಗಳೂರು ನಗರದ ನ್ಯಾಶ್ ತಂಡಕ್ಕೆ ಶಾಮನೂರು ಡೈಮಂಡ್ ಕಪ್ ನ್ನು ಹಾಗೂ ದಾವಣಗೆರೆ ಜನಪ್ರಿಯ ತಂಡಕ್ಕೆ ಶಿವಗಂಗಾ ಕಪ್ ನ್ನು ಪಡೆದವು.
೫ ದಿನಗಳ ಕಾಲ ನಡೆದ ಈ ಟೂರ್ನಮೆಂಟ್ ನಲ್ಲಿ ಹೊರ ರಾಜ್ಯದ ಕೇರಳ, ಚನ್ನೈ, ಗೋವಾ, ಮಹಾರಾಷ್ಟ್ರ, ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಸೇರಿದಂತೆ ೨೬ ತಂಡಗಳು ಭಾಗವಹಿಸಿದ್ದವು.
ರಾತ್ರಿ ೨ ಗಂಟೆಗೆ ನಡೆದ ಫೈನಲ್ ಪಂದ್ಯದಲ್ಲಿ ಕಳೆದ ಹ್ಯಾಟ್ರಿಕ್ ಜಯ ಸಾಧಿಸಿದ ಜನಪ್ರಿಯ ತಂಡದ ವಿರುದ್ಧ ಬೆಂಗಳೂರು ನಗರದ ನ್ಯಾಶ್ ತಂಡ ೧೨ ರನ್ ಗಳ ಜಯಗಳಿಸಿತು.
ಈ ಟೂರ್ನಿಯಲ್ಲಿ ವಿಜೇತ ಬೆಂಗಳೂರು ನಗರದ ನ್ಯಾಶ್ ತಂಡಕ್ಕೆ ಪ್ರಥಮ ಸ್ಥಾನ 3.55 ಲಕ್ಷ ರೂ. ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನ ಪಡೆದ ದಾವಣಗೆರೆಯ ಜನಪ್ರಿಯ ತಂಡಕ್ಕೆ 2.25 ಲಕ್ಷ ರೂ. ಹಾಗೂ ಶಿವಗಂಗಾ ಕಪ್, ತೃತೀಯ ಸ್ಥಾನ ಪಡೆದ ರಿಯಲ್ ಫೈಟರ್ ತಂಡಕ್ಕೆ 1.25 ಲಕ್ಷ ರೂ ಮತ್ತು ಆಕರ್ಷಕ ಕಪ್ ನೀಡಲಾಯಿತು.
ಆಫಿಶಿಯಲ್ ಕಪ್ ನ್ನು ಶಿವಗಂಗಾ ಶ್ರೀನಿವಾಸ್ ನೇತೃತ್ವದ ಮರ್ಚೆಂಟ್ ತಂಡ ಪ್ರಥಮ ಹಾಗೂ ಸಿಪಿಐ ಶಂಕರ್ ನೇತ್ರತ್ವದ ಪೋಲೀಸ್ ತಂಡ ದ್ವಿತೀಯ ಸ್ಥಾನ ಪಡೆದವು.
ವಿಶೇಷವಾಗಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಕುಳಿತುಕೊಂಡು ನೋಡಲು ಗ್ಯಾಲರಿಯ ವ್ಯವಸ್ಥೆ ಮಾಡಲಾಗಿತ್ತು.ಕೊನೆಯ ಪಂದ್ಯವನ್ನು ಐವತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ವೀಕ್ಷಿಸಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಕುರುಡಿ ಗಿರೀಶ್, ಎಸ್ ಬಿಟಿ ಮಹಾದೇವ್, ಜಯಪ್ರಕಾಶ್ ಗೌಡ , ಅಯೂಬ್ ಪೈಲ್ವಾನ್, ಸಿಪಿಐಗಳಾದ ಶಂಕರ್, ಗಿರೀಶ್, ದೇವರಾಜ್, ರಾಮರೆಡ್ಡಿ, ಮುಖಂಡರುಗಳಾದ ರಾಮನಾಥ್, ಜಾಕೀರ್, ಶಫೀಕ್ ಪಂಡಿತ್, ಇನಾಯತ್, ರವಿಕುಮಾರ್ ಗಾಂಧಿ, ಚಾಮುಂಡಿ ಕುಮಾರ್, ತುರ್ಚಘಟ್ಟ ಚಂದ್ರಶೇಖರ, ನರೇಶ್ ಮತ್ತಿತರರಿದ್ದರು.

Be the first to comment on "ದಾವಣಗೆರೆಯ ಜನಪ್ರಿಯ ತಂಡಕ್ಕೆ ಶಿವಗಂಗಾ ಕಪ್"

Leave a comment

Your email address will not be published.


*