ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜೆ.ಆರ್. ಷಣ್ಮುಖಪ್ಪ,ಉಪಾಧ್ಯಕ್ಷರಾಗಿ ಬಿ.ಕೆ. ಪ್ರಕಾಶ್ ಅಯ್ಕೆ

Share
  • 76
    Shares

     ಜೆ.ಆರ್. ಷಣ್ಮುಖಪ್ಪ                               ಬಿ.ಕೆ. ಪ್ರಕಾಶ್

ದಾವಣಗೆರೆ- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಜೆ.ಆರ್. ಷಣ್ಮುಖಪ್ಪ, ಉಪಾಧ್ಯಕ್ಷರಾಗಿ ಹರಪನಹಳ್ಳಿಯ ಬಿ.ಕೆ. ಪ್ರಕಾಶ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಕಳೆದ 2018, ಅಕ್ಟೋಬರ್ 30ರಂದು  ಚುನಾವಣೆ ನಡೆದಿದ್ದು, ಈ ಚುನಾವಣೆಯ ನಂತರ ಬ್ಯಾಂಕಿನ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು.ಈ ಬ್ಯಾಂಕಿನ ಚುನಾವಣೆಯಲ್ಲಿ ಕಾಂಗ್ರೆಸ್ಬೆಂಬಲಿತರೇ ಅತ್ಯಧಿಕ ಸಂಖ್ಯೆಯಲ್ಲಿ ಮತ್ತೊಂದು ಅವಧಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ವರಿಷ್ಠರ ನಿರ್ದೇಶನದ ಮೇರೆಗೆ ಷಣ್ಮುಖಪ್ಪ ಮತ್ತು ಪ್ರಕಾಶ್ ಅವರ ಆಯ್ಕೆ ಅವಿರೋಧವಾಗಿ ನಡೆಯಲು ಕಾರಣವಾಯಿತು.
ಬ್ಯಾಂಕಿನ ನಿರ್ದೇಶಕರುಗಳಾದ ಬಿ.ವಿ. ಚಂದ್ರಶೇಖರ್, ಜೆ.ಎಸ್.ವೇಣುಗೋಪಾಲರೆಡ್ಡಿ, ಬಿ.ಶೇಖರಪ್ಪ, ಜಿ.ಎನ್. ಸ್ವಾಮಿ, ಬಿ.ಹಾಲೇಶಪ್ಪ, , ಆರ್.ಜಿ.ಶ್ರೀನಿವಾಸಮೂರ್ತಿ,ಜಗದೀಶಪ್ಪ ಬಣಕಾರ್ ಅವರುಗಳು ಚುನಾವಣಾ ಪ್ರಕ್ರಿಯೆಯಯಲ್ಲಿ ಭಾಗವಹಿಸಿದ್ದರು. ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಈ ಬ್ಯಾಂಕಿಗೆ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜೆ.ಆರ್. ಷಣ್ಮುಖಪ್ಪ ಈ ಬಾರಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಚಿತ್ರದುರ್ಗ – ದಾವಣಗೆರೆ ಅವಿಭಜಿತ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

Be the first to comment on "ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜೆ.ಆರ್. ಷಣ್ಮುಖಪ್ಪ,ಉಪಾಧ್ಯಕ್ಷರಾಗಿ ಬಿ.ಕೆ. ಪ್ರಕಾಶ್ ಅಯ್ಕೆ"

Leave a comment

Your email address will not be published.


*