ಆರು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕುಗೊಳಿಸಿ : ಸಂಸದ ಜಿ.ಎಂ.ಸಿದ್ದೇಶ್ವರ

Share
  • 355
    Shares

ಚಿತ್ರದುರ್ಗದಿಂದ-ದಾವಣಗೆರೆ-ಹರಿಹರ-ಹುಬ್ಬಳ್ಳಿವರೆಗಿನ ಆರು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಚುರುಕುಗೊಳಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಇಂದು ಜಿ.ಎಂ.ಐ.ಟಿ. ಅತಿಥಿಗೃಹದಲ್ಲಿ ಕರೆಯಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಸೂಚನೆ ನೀಡಿದರು.
ಆರು ಪಥದ ಹೆದ್ದಾರಿ ಕಾಮಗಾರಿ ಕೈಗೊಳ್ಳುವ ವೇಳೆ ಹಳ್ಳಿಗಳ ಬಳಿ ಸಾರ್ವಜನಿಕರು ಕೆಲಸ ಕೈಗೊಳ್ಳಲು ಅಡ್ಡಿಪಡಿಸುತ್ತಿರುವ ಕಾರಣ ಕಾಮಗಾರಿ ವೇಗವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ, ಇದರಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿಲ್ಲ ಎಂದ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದರು ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಿ ನಾಲ್ಕು ಪಥದ ರಸ್ತೆ ಕಾಮಗಾರಿ ವೇಳೆ ಪ್ರಾಧಿಕಾರದವರು ಸಾಕಷ್ಟು ಲೋಪಗಳನ್ನು ಎಸಗಿದ್ದೀರಿ, ಆ ಲೋಪಗಳನ್ನು ಆರು ಪಥದ ಹೆದ್ದಾರಿ ನಿರ್ಮಾಣದ ವೇಳೆ ಸರಿಪಡಿಸಿಕೊಡಿ ಎಂದು ನಾನು ಸಾಕಷ್ಟು ಬಾರಿ ನಿಮಗೆ ತಿಳಿಸಿದ್ದೇನೆ, ನಾನು ಗ್ರಾಮಸ್ಥರ ಪರವಾಗಿ ನಿಲ್ಲುತ್ತೇನೇಯೇ ವಿನ: ಪ್ರಾಧಿಕಾರದ ಪರವಾಗಿ ನಿಲ್ಲುವುದಿಲ್ಲ, ಹೆದ್ದಾರಿ ಪ್ರಾಧಿಕಾರದವರ ತಪ್ಪುಗಳಿಂದಾಗಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ, ಅಂತಹ ಸಾವುನೋವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ ? ಎಂದರು ಪ್ರಶ್ನಿಸಿದರು.
ನೀವು ಮಾಡಿರುವ ತಪ್ಪಿಗೆ ಸಾರ್ವಜನಿಕರು ಏಕೆ ಬೆಲೆ ತೆರಬೇಕು ? ನೀವು ಕೈಯಿಂದ ದುಡ್ಡು ಹಾಕುವುದಿಲ್ಲ, ಸರ್ಕಾರ ಅನುದಾನ ಕೊಡುತ್ತದೆ ನೀವು ಕೆಲಸ ಮಾಡಿ, ನಿಮಗೆ ಸಮಸ್ಯೆ ಎದುರಾದರೆ ನನಗೆ ತಿಳಿಸಿ ಮಂತ್ರಿಗಳಿಗೆ ಹೇಳಿ ಮಂಜೂರು ಮಾಡಿಸಿಕೊಡುತ್ತೇನೆ, ಒಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ಮುಗಿಯಬೇಕು ಎಂದರು. ದಾವಣಗೆರೆಯ ಹದಡಿ ಸೇತುವೆಯಿಂದ ಹರಿಹರ-ಹುಬ್ಬಳ್ಳಿವರೆಗೆ ಇರ್‍ಕಾನ್ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದ್ದು, ಇದರಲ್ಲಿ ಬನಶಂಕರಿ ಬಡಾವಣೆಗೆ ಹೋಗುವ ಸೇತುವೆ ವಿಸ್ತರಣೆ, ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆ, ಹೊಸಕುಂದುವಾಡ ಬಳಿ ಹೊಸದೊಂದು ಸೇತುವೆ, ಹಳೆಕುಂದುವಾಡದ ಬಳಿ ಹೊಸದೊಂದು ಸೇತುವೆ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮತಿ ಸೂಚಿಸಿದರು.
ಶ್ಯಾಮನೂರು ಬಳಿ ಮಳೆಯಾದಾಗ ರಾಚಪ್ಪನ ಬೀಳು ಬಡಾವಣೆಯ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸು ತ್ತಾರೆ, ಮನೆಗಳಿಗೆಲ್ಲಾ ನೀರು ನುಗ್ಗಿ ಅಪಾರವಾದ ಹಾನಿ ಉಂಟಾ ಗುತ್ತದೆ, ಇದನ್ನು ನಾನು ಖುದ್ದು ಭೇಟಿ ನೀಡಿ ವೀಕ್ಷಣೆ ಮಾಡಿದ್ದೇನೆ ಇದಕ್ಕೆ ಪರಿಹಾರ ಏನು ಸಂಸದರು ಕೇಳಿದರು. ಮಹಾನಗರ ಪಾಲಿಕೆ ಆಯುಕ್ತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೀರು ಹರಿದಹೋಗಲು ಪೈಪ್‌ಗಳನ್ನು ಹಾಕಿದ್ದಾರೆ, ಇದರ ಬದಲಾಗಿ ಕಲ್ವರ್ಟ್ ನಿರ್ಮಾಣ ಮಾಡಿಕೊ ಡಬೇಕು ಆಗ ಮಾತ್ರ ರಾಚಪ್ಪನ ಬೀಳು ಬಡಾವಣೆಯ ನಾಗರೀಕರ ಸಮಸ್ಯೆ ಪರಹಾರವಾಗುತ್ತದೆ ಎಂದರು, ಪ್ರಾಧಿಕಾರದವರು ಕಲ್ವರ್ಟ್ ನಿರ್ಮಾಣ ಮಾಡಲು ಮೀನಮೇಷ ಎಣಿಸುತ್ತಿದ ಸಂದರ್ಭದಲ್ಲಿ ಸಂಸದರು ಮದ್ಯ ಪ್ರವೇಶ ಮಾಡಿ ಪ್ರಾಧಿಕಾರದವರು ಕಲ್ವರ್ಟ್ ನಿರ್ಮಾಣ ಮಾಡಿಕೊಡಿ ಎಂದರು ಇದಕ್ಕೆ ಸಮ್ಮತಿ ನೀಡಿದ ಪ್ರಾಧಿಕಾರದ ಅಧಿಕಾರಿಗಳು ಶ್ಯಾಮನೂರು, ಬನಶಂಕರಿ ಬಡಾವಣೆ ಮತ್ತು ಹಳೇಬಾತಿ ಬಳಿ ಭೂ-ಸ್ವಾಧೀನದ ಸಮಸ್ಯೆಯಿದೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಹಣ ಸಿದ್ದವಿದ್ದು, ವಿಶೇಷ ಭೂ-ಸ್ವಾಧೀನಾಧಿಕಾರಿಗಳು ನೋಟಿಫೀಕೇಷನ್ ಹೊರಡಿಸಿದರೆ ಕಾರ್ಯ ಸುಗುಮವಾಗುತ್ತದೆ ಎಂದರು,
ತಕ್ಷಣ ವಿಶೇಷ ಭೂಸ್ವಾಧಿನಾಧಿಕಾರಿಗಳನ್ನು ಕರೆಯಿಸಿದ ಸಂಸದರು ಇನ್ನೆರಡು ದಿನಗಳ ಒಳಗೆ ಭೂ-ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಿ, ಅಧಿಕಾರಿಗಳ ನಡುವೆ ಸಮನ್ವಯತೆಯಿಲ್ಲ ನಿಮ್ಮ ಕಾರಣದಿಂದ ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ, ಯಾವುದೇ ಕಾರಣಕ್ಕೂ ಸಬೂಬು ಹೇಳಬೇಡಿ ನನಗೆ ತ್ವರಿತವಾಗಿ ಕೆಲಸವಾಗಬೇಕು ಎಂದು ಎಚ್ಚರಿಕೆ ನೀಡಿದರು. ಚಿತ್ರದುರ್ಗದಿಂದ ದಾವಣಗೆರೆಯ ಹದಡಿ ಸೇತುವೆಯವರೆಗೆ ಪಿಎನ್‌ಸಿ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದ್ದು ಈ ಭಾಗದಲ್ಲಿ ಹುಣಸೇಕಟ್ಟೆ, ಹಾಲುವರ್ತಿ, ಮಲ್ಲಶೆಟ್ಟಿಹಳ್ಳಿ, ಹೆಚ್.ಕಲ್ಪನಹಳ್ಳಿ, ಆನಗೋಡು ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೇತುವೆಗಳನ್ನು ನಿರ್ಮಾಣ ಮಾಡಿ ಈಗಾಗಲೇ ನಾನು ಈ ಕಾಮಗಾರಿಗಳಿಗೆ ಶಿಫಾರಸ್ಸು ಮಾಡಿದ್ದೇನೆ ಎಂದರು. ಸಭೆಯಲ್ಲಿ ಮಾಹಾನಗರ ಪಾಲಿಕೆಯ ಆಯುಕ್ತರಾದ ಮಂಜುನಾಥ್ ಬಳ್ಳಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ್ ನಾಯ್ಡು, ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಪಾಲಿಕೆ ಅಧಿಕಾರಿಗಳಾದ ಅಣಜಿ ನಾಗರಾಜ್, ಮಂಜುನಾಥ್. ವಿಶೇಷ ಭೂ-ಸ್ವಾಧೀನಾಧಿಕಾರಿ ಬಾಲಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment on "ಆರು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕುಗೊಳಿಸಿ : ಸಂಸದ ಜಿ.ಎಂ.ಸಿದ್ದೇಶ್ವರ"

Leave a comment

Your email address will not be published.


*