ಎ. ಐ. ಸಿ. ಟಿ. ಇ. – ಸಿ. ಐ. ಐ. ಸಹಯೋಗದ ಸರ್ವೆಯಲ್ಲಿ  ಜಿ.ಎಂ.ಐ.ಟಿ. ಕಾಲೇಜಿಗೆ ಚಿನ್ನದ ಗರಿ

Share
  • 276
    Shares

ದಾವಣಗೆರೆ-ಕೈಗಾರಿಕೋದ್ಯಮ ಸಂಪರ್ಕದೊಂದಿಗೆ ಬೆಳೆಯುತ್ತಿರುವ ತಾಂತ್ರಿಕ ಮಹಾವಿದ್ಯಾಲಯಗಳ ವಾರ್ಷಿಕ ಸರ್ವೆಯನ್ನು ಎ. ಐ. ಸಿ. ಟಿ. ಇ. ಹಾಗೂ ಸಿ. ಐ. ಐ. ಸಂಸ್ಥೆಗಳು ಜಂಟಿಯಾಗಿ ನಡೆಸುತ್ತವೆ. 2018ನೇ ಸಾಲಿನ ಸರ್ವೆಯಲ್ಲಿ ನಗರದ ತಾಂತ್ರಿಕ ಮಹಾವಿದ್ಯಾಲಯ ವಾದ ಜಿ. ಎಂ. ಐ. ಟಿ. ಕಾಲೇಜಿನ ಸತತ ಸಾಧನೆಗಳನ್ನು ಪರಿಗಣಿಸಿ ಚಿನ್ನದ ಪ್ರಾಶಸ್ಥ್ಯವನ್ನು ನೀಡಿ ಗೌರವಿಸಲಾಗಿದೆ. ಸದರಿ ಕಾಲೇಜು ಈಗಾಗಲೇ ೫೦ಕ್ಕೂ ಹೆಚ್ಚು ಕೈಗಾರಿಕೋದ್ಯಮಗಳೊಂದಿಗೆ ಸಹಯೋಗ ಹೊಂದಿದ್ದು, ಹಲವಾರು ಸಂಸ್ಥೆಗಳೊಂದಿಗೆ MOU, ಇಂಟರ್ನ್‌ಶಿಪ್, ಕನ್ಸಲ್ಟೆನ್ಸಿ, ಆರ್ ಅಂಡ್ ಡಿ ಚಟುವಟಿಗಳೊಂದಿಗೆ ತಾಂತ್ರಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳ ಗುಣಮಟ್ಟ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಹಾಗೂ 4 ವರ್ಷ ಸತತವಾಗಿ ಶೇಕಡಾ 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಇಂಟವ್ಯೂ ನಲ್ಲಿ ಉದ್ಯೋಗ ದೊರೆತ್ತಿದ್ದು, ಕೆಲವರು ಉದ್ಯಮಶೀಲರಾಗಿ ಹಾಗೂ ಹೆಚ್ಚಿನ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿದ್ದಾರೆ.
ಸರ್ವೆಯಲ್ಲಿ ಭಾಗವಹಿಸಿದ 755  ಕಾಲೇಜುಗಳಲ್ಲಿ ಜಿ. ಎಂ. ಐ. ಟಿ. ಕಾಲೇಜಿಗೆ ಲಭಿಸಿರುವ ಚಿನ್ನದ ಪ್ರಾಶಸ್ಥ್ಯ ನಮ್ಮ ದಾವಣಗೆರೆಗೆ ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಚೇರ್‍ಮನ್ ಜಿ. ಎಂ. ಲಿಂಗರಾಜು, ಆಡಳಿತಾಧಿಕಾರಿಯವರಾದ ಸುಭಾಷ್ ಚಂದ್ರ ರವರು ಸಮಸ್ತ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಾರೆ.

Be the first to comment on "ಎ. ಐ. ಸಿ. ಟಿ. ಇ. – ಸಿ. ಐ. ಐ. ಸಹಯೋಗದ ಸರ್ವೆಯಲ್ಲಿ  ಜಿ.ಎಂ.ಐ.ಟಿ. ಕಾಲೇಜಿಗೆ ಚಿನ್ನದ ಗರಿ"

Leave a comment

Your email address will not be published.


*