ರೋಟರಿ ಸಂಸ್ಥೆಯಿಂದ ನಾರ್ವೇ ರೋ. ಕ್ಜೆಟಿಲ್ ಉಟ್ನೆ ಅವರಿಗೆ ಸ್ವಾಗತ

Share
  • 1
    Share

ದಾವಣಗೆರೆ-ಬಾಲ ಕಾರ್ಮಿಕರ ಪದ್ದತಿಯನ್ನು ಹೋಗಲಾಡಿಸುವ ಸಲುವಾಗಿ ನಾರ್ವೇ ದೇಶದ ಸುಮಾರು 63 ವರ್ಷ ವಯಸ್ಸಿನ ರೋ. ಕ್ಜೆಟಿಲ್ ಉಟ್ನೆ ಅವರು ಸುಮಾರು ೧೨ ದೇಶಗಳನ್ನು ಸೈಕಲ್‌ನಲ್ಲಿ ಸಂಚರಿಸಿ  (ದಿನಾಂಕ : ೦೨-೧೨-೨೦೧೮ ರಂದು) ದಾವಣಗೆರೆ ನಗರಕ್ಕೆ ಭೇಟಿ ನೀಡಿದಾಗ ದಾವಣಗೆರೆ ರೋಟರಿ ಕ್ಲಬ್‌ನ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.
ಕ್ಜೆಟಿಲ್ ಅವರು ನಾವೇ ದೇಶದ ಟ್ರೋಡೆಂ ನಗರದಲ್ಲಿನ ನೋಟರಿ ಹಿರಿಯ ಸದಸ್ಯರಾಗಿದ್ದಾರೆ. ಈಗಾಗಲೇ ಹಲವು ಬಾರಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಉಟ್ನೆ ಅವರು ನಾರ್ವೆ-ಭಾರತ-ಸೈಕೋತಾನ್ ಎಂಬ ಜಾಥಾವನ್ನು ಮೂರು ಚಕ್ರಗಳ ಸೈಕಲ್‌ನಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ. ಇವರ ಸಾಮಾಜಿಕ ಕಳಕಳಿಯು ೬೩ ವರ್ಷ ವಯಸ್ಸಿನ ಇಳಿ ವಯಸ್ಸಿನಲ್ಲಿ ಯುವಜನತೆಗೆ ಪ್ರೇರಣೆಯಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಬೇತೂರು ಜಗದೀಶ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಹಾಯಕ ರಾಜ್ಯಪಾಲರಾದ ವಿಶ್ವಜೀತ್ ಕೆ. ಜಾಧವ್, ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ಕಾರ್ಯದರ್ಶಿಗಳಾದ ಬಸವರಾಜ್ ಹೆಚ್.ಜಿ., ಟ್ರಸ್ಟಿಗಳಾದ ಚಿಗಟೇರಿ ಬಸವರಾಜ್, ಅಶೋಕ ರಾಯಬಾಗಿ, ಸುಜಿತ್‌ಕುಮರ್ ಶಾ, ಮಾಜಿ ಮಿಡ್‌ಟೌನ್ ಮಾಜಿ ಅಧ್ಯಕ್ಷರಾದ ಎ.ಎನ್. ಶೇಖರ್, ಜಿಲ್ಲಾ ರೋಟರ್‍ಯಾಕ್ಟ್ ಪ್ರತಿನಿಧಿ ಮಹಮ್ಮದ್ ಗೌಸ್, ರೋಟರ್‍ಯಾಕ್ಟ್ ಕ್ಲಬ್ ದಾವಣಗೆರೆ ದಕ್ಷಿಣದ ಅಧ್ಯಕ್ಷರಾದ ಪೃಥ್ವಿ ಬಿ.ಎಂ., ಕಾರ್ಯದರ್ಶಿ ಪ್ರವೀಣ್‌ಕುಮಾರ್ ಎ., ಮಾಜಿ ಅಧ್ಯಕ್ಷರಾದ ಸುರೇಶ್ ಕೆ.ಎನ್., ಶ್ರೀಕಾಂತ ಬಗರೆ ಹಾಗೂ ರೋಟರ್‍ಯಾಕ್ಟ್ ಕ್ಲಬ್ ಕಲಾನಿಕೇತನದ ಎಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು.

Be the first to comment on "ರೋಟರಿ ಸಂಸ್ಥೆಯಿಂದ ನಾರ್ವೇ ರೋ. ಕ್ಜೆಟಿಲ್ ಉಟ್ನೆ ಅವರಿಗೆ ಸ್ವಾಗತ"

Leave a comment

Your email address will not be published.


*